`ಸಂತು ಸ್ಟ್ರೇಟ್ ಫಾರ್ವರ್ಡ್` ನಾಳೆಯಿಂದ ತೆರೆಗೆ
Posted date: 27 Thu, Oct 2016 – 09:45:33 AM

ಹೆಸರಾಂತ ನಿರ್ಮಾಪಕ ಕೆ ಮಂಜು ಅವರ ಲಕ್ಷ್ಮಿ ಶ್ರೀ ಕಂಬೈನ್ಸ್ ಅಡಿಯಲ್ಲಿ ತಯಾರಾದ ರಾಕಿಂಗ್ ಸ್ಟಾರ್ ಯಶ್ ಹಾಗೂ ಮೋಹಕ ತಾರೆ ರಾಧಿಕಾ ಪಂಡಿತ್ ಅಭಿನಯದ ಸಿನಿಮಾ ‘ಸಂತು ಸ್ಟ್ರೇಟ್ ಫಾರ್ವರ್ಡ್ ಇದೆ ಶುಕ್ರವಾರ ಭರ್ಜರಿಯಾಗಿ ಬಿಡುಗಡೆಯಾಗಲಿದೆ. ದೀಪಾವಳಿ ಹಬ್ಬದ ಮುಂಚೆಯೇ ತೆರೆಯ ಈ ಚಿತ್ರ ಸಂಭ್ರಮ ಸಡಗರಕ್ಕೆ ನಾಂದಿ ಹಾಡಲಿದೆ.
‘ಸಂತು ಸ್ಟ್ರೇಟ್ ಫಾರ್ವರ್ಡ್ ಮುಖ್ಯಾಂಶಗಳನ್ನು ನಿರ್ದೇಶಕ ಮಹೇಶ್ ರಾವ್ ಅವರು ಈ ರೀತಿ ಪಟ್ಟಿ ಮಾಡುತ್ತಾರೆ.
ಐದೂವರೆ ತಿಂಗಳಿನಲ್ಲಿ ೧೧೦ ದಿವಸ ಚಿತ್ರೀಕರಣ ಮಾಡಲಾದ ಈ ಚಿತ್ರದ ಪ್ರಮುಖ ಆಕರ್ಷಣೆ ಯಶ್ ಹಾಗೂ ರಾಧಿಕಾ ಪಂಡಿತ್. ಜೊತೆಗೆ ಶಾಮ್, ದೇವರಾಜ್, ಸುಮಿತ್ರಮ್ಮ, ಗಿರೀಶ್, ಸೀತಾ ಮತ್ತಿತರರು ತಾರಾಗಣದಲ್ಲಿದ್ದಾರೆ.
ಇದು ಪ್ರೇಮ ಕಥೆಯ ಜೊತೆಗೆ, ಸಂಬಂದಗಳಿಗೆ, ಭಾವನೆಗಳಿಗೆ ಒತ್ತು ಕೊಟ್ಟು ಮನರಂಜನೆಗೆ ಒತ್ತು ನೀಡಿರುವ ಚಿತ್ರ. ಕುಟುಂಬ ಸಮೇತ ನೋಡಬಹುದಾದ ಚಿತ್ರ ಎಂದು ನಿರ್ದೇಶಕರು ಬಣ್ಣಿಸುತ್ತಾರೆ.
ಇದು ಕೆ ಮಂಜು ಅವರ ವೃತ್ತಿ ಜೀವನದ ೩೭ ನೇ ಸಿನಿಮಾ. ಬಹು ದೊಡ್ಡ ತಾರಗಣದ ಮತ್ತು ಅತಿ ಹೆಚ್ಚು ಖರ್ಚಾಗಿರುವ ಸಿನಿಮಾ ‘ಸಂತು ಸ್ಟ್ರೇಟ್ ಫಾರ್ವರ್ಡ್. ಕೆ ಮಂಜು ಅವರ ಹೆಸರಾಂತ ಸಿನಿಮಾಗಳ ಪಟ್ಟಿಯಲ್ಲಿ ‘ಜಮೀನ್ದಾರ್ರು, ಕಳ್ಳ ಮಳ್ಳ ಸುಳ್ಳ, ರಾಮ ಶಾಮ ಭಾಮಾ, ಮಾತಾಡ್ ಮಾತಾಡ್ ಮಲ್ಲಿಗೆ, ಗಾಡ್ ಫಾಧರ್, ಶೈಲೂ, ಶಿಕಾರಿ, ರಾಗಿಣಿ ಐ ಪಿ ಎಸ್, ಅರಮನೆ ಮುಂತಾದ ಜನಪ್ರಿಯ ಚಿತ್ರಗಳು ಜಮೆಯಾಗಿವೆ.
ವಿ ಹರಿಕೃಷ್ಣ ಅವರ ಸಂಗೀತದಲ್ಲಿ ಆರು ಹಾಡುಗಳು ಮೂಡಿ ಬಂದಿದೆ. ಯೋಗರಾಜ್ ಭಟ್, ಗೌಸ್‌ಪೀರ್, ಚೇತನ್ ಕುಮಾರ್ ಅವರು ಗೀತ ಸಾಹಿತ್ಯ ಒದಗಿಸಿದ್ದಾರೆ. ಆಂಡ್ರೂ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ. ತೆಲುಗು ಹಾಗೂ ತಮಿಳು ಭಾಷೆಗಳಲ್ಲಿ ಛಾಯಾಗ್ರಹಣ ೧೮ ಸಿನಿಮಾಗಳಿಗೆ ಮಾಡಿದ ಬೆಂಗಳೂರಿನ ಆಂಡ್ರೂ ಇದೇ ಮೊದಲ ಬಾರಿಗೆ ಕನ್ನಡ ಸಿನಿಮಾಕ್ಕೆ ಛಾಯಾಗ್ರಹಣ ಮಾಡಿದ್ದಾರೆ.
ಡಾ ರವಿ ವರ್ಮಾ ನಿರ್ದೇಶನದ ಐದು ಭರ್ಜರಿ ಸಾಹಸ ಸನ್ನಿವೇಶಗಳಿವೆ. ಕೆ ಎಂ ಪ್ರಕಾಶ್ ಸಂಕಲನ ಮಾಡಿದ್ದಾರೆ. ಅನಿಲ್ ಕುಮಾರ್ ಸಂಭಾಷಣೆ, ಶೇಖರ್, ಹರ್ಷ ಹಾಗೂ ಮುರಳಿ ಅವರ ನೃತ್ಯ ಸಂಯೋಜನೆ ಮಾಡಿದ್ದಾರೆ.
ಬೆಂಗಳೂರು, ಹೈದರಾಬಾದ್, ನಾರ್ವೆ, ಮೈಸೂರು, ಗೋವ, ಸಾಗರ ಹಾಗೂ ಇನ್ನಿತರ ಸ್ಥಳಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. ನಾರ್ವೆ ದೇಶದಲ್ಲಿ ೧೨ ದಿವಸದಲ್ಲಿ ಅಲ್ಲಿಯ ಸೌಂದರ್ಯವನ್ನು ಸೆರೆ ಹಿಡಿದು ೨ ಹಾಡುಗಳನ್ನು ಚಿತ್ರೀಕರಿಸಲಾಗಿದೆ. ಜಯಣ್ಣ ಫಿಲ್ಮ್ಸ್ ಈ ಚಿತ್ರವನ್ನು ೩೦೦ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುತ್ತಿದೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed